Social Activities
Social Activities – 2024
Walkathon – “A step with GURUJI towards healthy Life”.
ಪರಮ ಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ಸಂಪೂರ್ಣ ಆಶೀರ್ವಾದದಿಂದ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಭಾನುವಾರ 25 Feb 2024 WALKATHON ಸಮಾಜಮುಖಿ ಕಾರ್ಯಕ್ರಮವನ್ನು ಮೈಸೂರು ಸುಪ್ರಸಿದ್ದಿ ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮ “ಆರೋಗ್ಯವೇ ಭಾಗ್ಯ” – ವ್ಯಾಯಾಮ ದೇಹಕ್ಕೆ ಅತ್ಯಗತ್ಯ ಮತ್ತು ಪ್ರಾಕೃತಿಕ ವನ್ಯ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶವಾಗಿತ್ತು.
ಪರಮಪೂಜ್ಯ ಗುರುಗಳು ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಹಲವು ಜಿಲ್ಲೆಗಳಿಂದ ಆಗಮಿಸಿರುವ ನೂರಾರು ಆತ್ಮ ಬಂಧುಗಳೊಂದಿಗೆ ವಾಕಥಾನ್ನಲ್ಲಿ ಪಾಲ್ಗೊಂಡು ಕುಕ್ಕರಹಳ್ಳಿ ಕೆರೆ ಆವರಣದಲಿದ್ದ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ಮತ್ತು ಪ್ರಕೃತಿ-ಸಂರಕ್ಷಣೆ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸಿದರು.
ನಂತರ ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ವಾಕಥಾನ್ ನಲ್ಲಿ ಭಾಗವಹಿಸಿದ ಆತ್ಮಬಂಧುಗಳಿಗೆ, ಮೈಸೂರಿನ ನಾಗರಿಕರಿಗೆ ಅನುಕೂಲಕ್ಕಾಗಿ ವೈದ್ಯಕೀಯ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸಹ ನಮ್ಮ ಟ್ರಸ್ಟ್ ಏರ್ಪಡಿಸಿತ್ತು. ಗುರುಗಳು ನೆರೆದಿದ್ದ ಎಲ್ಲ ಆತ್ಮ ಬಂಧುಗಳಿಗೆ, ಸಾರ್ವಜನಿಕರಿಗೆ ಶುಭಕೋರಿ, ಆಶೀರ್ವದಿಸಿದರು. ತದನಂತರ ಭಾಗವಹಿಸಿದವರೆಲ್ಲರಿಗೂ ಉಪಹಾರವನ್ನು ನೀಡಲಾಯಿತು.
ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯ ಪ್ರಾಣಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಸೇವಾ ಕಾರ್ಯ
ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ನಿಂದ ಮುಂದುವರೆದ ಶ್ರೇಷ್ಠ ಸೇವಾ ಕಾರ್ಯ
ಸದಾ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ಮತ್ತೊಂದು ಸೇವಾ ಕಾರ್ಯ ಪೂರ್ಣಮಾಡಿದೆ.
ಲೋಕಾಃ ಸಮಸ್ತಃ ಸುಖಿನೋ ಭವಂತು ಎಂಬಂತೆ ಈ ಬಾರಿ ಅಸಹಾಯಕ ಮೂಕ ಪ್ರಾಣಿಗಳಿಗೆ ನೆರವಾಗುವ ಮೂಲಕ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ. ದಿನಾಂಕ 26 ಜನವರಿ ಗಣರಾಜ್ಯೋತ್ಸವದ ಅಂಗವಾಗಿ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜರ ಮತ್ತು ರಂಗಾಲಕ್ಷ್ಮಿ ಅಮ್ಮನವರ ಆಶೀರ್ವಾದದೊಂದಿಗೆ ಶುಕ್ರವಾರ ಮೈಸೂರಿನ ಬೋಗಾದಿಯಲ್ಲಿರುವ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿರುವ ಅಸಹಾಯಕ ಪ್ರಾಣಿಗಳಾದ ಹಸು , ಕುದುರೆ , ಶ್ವಾನಗಳು , ಮೊಲ , ಬೆಕ್ಕು , ಮಂಗಗಳು ಸೇರಿದಂತೆ ಎಲ್ಲಾ ಪ್ರಾಣಿಗಳಿಗೆ ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳನ್ನು ನೀಡಲಾಯಿತು.
ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯು ಊನಗೊಂಡ ಮತ್ತು ಅಪಘಾತದಲ್ಲಿ ಗಾಯಗೊಂಡ ಪ್ರಾಣಿಗಳನ್ನು ಕರೆತಂದು ಅವುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿ ಮಾಡುತ್ತಿರುವುದನ್ನು ಗಮನಿಸಿ ಈ ಸೇವಾ ಸೌಲಭ್ಯ ಕಲ್ಪಿಸಿದೆ.
Social Activities – 2023 By
Swarna Nrisimha Datta Sai Peetika Seva Trust
ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳ ವರ್ಧಂತಿಯ ಪ್ರಯುಕ್ತ ೦೧/೦೬/೨೦೨೩ ರಿಂದ ೦೮/೦೬/೨೦೨೩ರರವರೆಗೆ ರಾಜ್ಯಾದ್ಯಂತ ಸೇವಾ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಲವಾರು ಭಕ್ತರು ರಾಜ್ಯದ ವಿವಿಧೆಡೆ ಸೇವಾ ಚಟುವಟಿಕೆಗಳನ್ನು ನಡೆಸಿದರು. ಸೇವಾ ಸಪ್ತಾಹದ ಒಂದು ಪಕ್ಷಿ ನೋಟ ಇಲ್ಲಿದೆ.
Birthday Celebrations of Sri Sri Arjuna Avadhootha Maharaja:
On the occasion of birthday celebrations of Sri Sri Arjuna Avadhootha Maharaja, Seva Saptaha was conducted. As part of the celebrations, from 1st June to 8th June devotees across different parts of Karnataka participated in social service activities. Here is a glimpse of some of the activities.
Cleaning Program
ಸೇವಾ ಸಪ್ತಾಹ ಅಂಗವಾಗಿ ದಿನಾಂಕ 07/06/23 ಬುಧವಾರ ಬೆಳಿಗ್ಗೆ 6.15 ರಿಂದ 8.00 ರವರೆಗೆ ಮೈಸೂರು ಒಂಟಿಕೊಪ್ಪಲ್ ನಲ್ಲಿರುವ ಲಕ್ಷ್ಮಿ ನರಸಿಂಹ ದೇವಸ್ಥಾನ ಸ್ವಚ್ಛತೆ ಕಾರ್ಯ(ಶ್ರಮದಾನ) ಹಮ್ಮಿಕೊಳ್ಳಲಾಗಿತ್ತು.
ಸ್ಥಳ: ಒಂಟಿಕೊಪ್ಪಲ್ ಲಕ್ಷ್ಮಿ ನರಸಿಂಹ ದೇವಸ್ಥಾನ
ಸಮಯ: ಬೆಳಿಗ್ಗೆ 06.15ಗಂಟೆ
On 07/06/23 Wednesday, cleaning program of Lakshmi NarasimhaSwamy Temple at Ontikoppal Mysore was conducted.
Eye Donation
ನಮ್ಮ ಗುರು ಬಂಧುಗಳಾದ ಶ್ರೀಮತಿ ಶಿಲ್ಪ ಅನಿಲ್ ಮತ್ತು ಕು.ಸಿರಿ ಚಂದನರವರು ಪರಮಪೂಜ್ಯ ಗುರುಗಳ ಹುಟ್ಟುಹಬ್ಬ ಪ್ರಯುಕ್ತ ನಡೆಯುತ್ತಿರುವ ಸೇವಾ ಸಪ್ತಾಹ ಕಾರ್ಯಕ್ರಮದಲ್ಲಿ ನೇತ್ರದಾನಕ್ಕೆ ಸಹಿ ಹಾಕಿರುತ್ತಾರೆ. ಅವರ ಈ ನಡೆ ಅನೇಕರಿಗೆ ಮಾದರಿಯಾಗಿದೆ.
As part of the Seva Saptaha program our Guru Bandhus Mrs. Shilpa Anil and Ms. Siri Chandana signed the form for eye donation.
Blood Donation Camp
ದಿನಾಂಕ ೦೫/೦೭/೨೦೨೩ ಮತ್ತು ೦೬/೦೭೨೦೨೩ ರಂದು ಕಾಮಾಕ್ಷಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಪರಮಪೂಜ್ಯ ಶ್ರೀ ಶ್ರೀ ಅರ್ಜುನ ಅವಧೂತ ಮಹಾರಾಜ ಗುರುಗಳು ಶಿಬಿರವನ್ನು ಉದ್ಘಾಟಿಸಿದರು. ಸುಮಾರು ೫೦ ಜನರು ಸ್ವಯಂಪ್ರೇರಿತರಾಗಿ ರಕ್ತ ದಾನವನ್ನು ಮಾಡಿದರು
On 05/07/2023 and 06/07/2023 Blood Donation Camp was organised in Association with Kamakshi Hospital. Sri Sri Arjuna Avadhoota Maharaja inaugurated the camp. About 50 volunteers donated blood.
Blood Donation
ದಿನಾಂಕ 05.06.23 ಸೋಮವಾರದಂದು ತುಮಕೂರಿನ “ಅಕ್ಷಯ ನರ್ಸಿಂಗ್ ಕಾಲೇಜ್” ನಲ್ಲಿ “ರಕ್ತದಾನ” ಶಿಬಿರವನ್ನು ಏರ್ಪಡಿಸಿ ದ್ದು ರಕ್ತದಾನವನ್ನು ಮಾಡಿದವರಿಗೆ ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿ, ಹಣ್ಣು, ಬಿಸ್ಕೆಟ್, ಜ್ಯೂಸ್ ವಿತರಿಸಿರುತ್ತೆವೆ. ಈ ಕಾರ್ಯಕ್ರಮವನ್ನು ಶ್ರೀಮತಿ.ಸುಮಾ ಮೆನನ್ ನವರು ಆಯೋಜಿಸಿದ್ದು, ಶ್ರೀ ರವಿ ಮುದ್ದಲಿಂಗನಹಳ್ಳಿ ರವರ ಸಹಕಾರ ದೊಂದಿಗೆ ,ತುಮಕೂರಿನ ಆತ್ಮ ಬಂಧುಗಳೆಲ್ಲ ಸೇರಿ ಈ ಕಾರ್ಯಕ್ರಮ ವನ್ನು ಸಂಪನ್ನಗೊಳಿಸಿ ರುತ್ತಾರೆ.
On 05/06/2023 Blood Donation camp was successfully conducted at Akshaya Nursing College.
Neem Plantation
ದಿನಾಂಕ 04.06.23 ಭಾನುವಾರದಂದು ತುಮಕೂರಿನ ಗುರು ಬಂಧುಗಳಾದ ಶ್ರೀಮತಿ. ಅನುಪಮ ಹಾಗೂ ಶ್ರೀ.ಶ್ರೀನಿವಾಸ್ ರವರು ತಮ್ಮ ಹುಟ್ಟೂರಾದ ಕಾಳೆನಹಳ್ಳಿಯಲ್ಲಿ “ಗಿಡ ನೆಡುವ” ಕಾರ್ಯಕ್ರಮವನ್ನು
ಆಯೋಚಿಸಿದ್ದು ಎಲ್ಲಾ ಗುರು ಬಂಧುಗಳು ಬೇವಿನ ಸಸಿಯನ್ನು ನೆಟ್ಟು “ವನಸಿರಿ” ಮಹೋತ್ಸವವನ್ನು ಆಚರಿಸಿರುತ್ತಾರೆ
On 04/06/2023 Sunday Neem Sapling plantation was done at Kalenahalli, Tumkur
Goumatas Goupooja
ದಿನಾಂಕ 06.06.23 ಮಂಗಳವಾರದಂದು ತುಮಕೂರಿನ ಸಪ್ತಗಿರಿ ಎಕ್ಸ್ಟೆಂಶನ್ ನಲ್ಲಿರುವ ಗೋಶಾಲೆಯಲ್ಲಿ “ಗೋಪೂಜೆ”ಯನ್ನು ನೆರವೇರಿಸಿ, ಅಲ್ಲಿರುವ ಗೋವುಗಳಿಗೆ ಒಂದು ದಿನದ ಮೇವಿನ ವ್ಯವಸ್ಥೆಯನ್ನು ಗುರು ಬಂಧುಗಳನ್ನು ಸೇರಿ ಮಾಡಿರುತ್ತೇವೆ.
On 06/06/23 Tuesday Goupooja was organised at a Goushala in Saptagiri Extension, Tumkur. Sufficient Fodder for one day for all Goumatas was provided.
Donating Wheel Chair
ದಿನಾಂಕ 09.06.23 ಶುಕ್ರವಾರದಂದು ತುಮಕೂರಿನ ಟಿ.ಪಿ ಕೈಲಾಸ ರಸ್ತೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಹಾಲ್ ನಲ್ಲಿ ಇಬ್ಬರು ಮಾನಸಿಕ ಹಾಗೂ ದೈಹಿಕ ವಿಕಲಚೇತನ ಮಕ್ಕಳಿಗೆ “ವೀಲ್ ಚೇರ್” ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀಮತಿ ಪುಷ್ಪ ಹಾಗೂ ಶ್ರೀ ರಮೇಶ್ ರವರೊಂದಿಗೆ ತುಮಕೂರಿನ ಗುರು ಬಂಧುಗಳೆಲ್ಲ ಸೇರಿ ಯಶಸ್ವಿಯಾಗಿ ನೆರವೇರಿಸುತ್ತಾರೆ.
On 09/06/2023 Friday Wheel Chairs were provided to two Divyangs at Public Library Hall, TP Kailasam Road, Tumkur.
Sponsored Educational Fund
ಸೇವಾ ಸಪ್ತಾಹದ ಅಂಗವಾಗಿ ಬೆಂಗಳೂರಿನ ಬನ್ನೇರುಘಟ್ಟದ ಹತ್ತಿರ ಇರುವ ಕಲ್ಲುಬಾಳು ಗ್ರಾಮದ ವಿವೇಕಾನಂದ ಕೇಂದ್ರ ವಿದ್ಯಾಲಯಕ್ಕೆ ಒಂದು ಲಕ್ಷ ರೂಪಾಯಿಗಳ ಧನ ಸಹಾಯವನ್ನು ಮಾಡಲಾಯಿತು. ಈ ಸಹಾಯಧನವನ್ನು ಮೇಘಾಲಯದಿಂದ ಬಂದಿರುವ ಐದು ವಿದ್ಯಾರ್ಥಿಗಳ ಶಾಲಾ ಶುಲ್ಕಕ್ಕೆ ಉಪಯೋಗಿಸಲಾಗುವುದು.
As part of Seva Saptaaha, education of 5 kids from Meghalaya was sponsored at a cost of Rupees One Lakh. These kids are being provided quality education at Vivekananda Kendra Vidyalaya, Kallubalu near Bannerghatta, Bangalore.
The trust took up the following activities since its inception
Distribution of Winter Wears In Mysore City
In order to provide respite from chilly weather conditions during the winter of 2018-19, distribution of blankets, jackets, mats to the destitute sleeping on the streets, pavements, etc in The City of Mysore was undertaken.
Blankets, jackets, mats and other warm winter clothings were distributed in and around The City of Mysore viz Market, Bus Stand, Railway Station, police constables Etc.
Provided Medical Aid
In order to provide Medical aid to those affected in floods during Monsoon 2018-19, distribution of Medicine to those effected due to Rain in Kodagu during monsoon of 2018.
Doctors and Paramedical team of Ashwini Hospital situated in Lakshmipuram, Mysore were deployed in Kodagu to provide service of medical checkup and distribution of medicine during the monsoon.
The medical team in conjunction with Primary Health Centre, Suntikoppa relentlessly provided the much needed Medical Aid for 3 consecutive months.
Donations From The Trust
Wheel Chair Distribution:
The Trust also distributed free of cost a wheel chair for a flood victim Smt. Seethamma aged about 86 years.
The Trust throughout the year undertakes the following activities to provide medical relief for the downtrodden and ensure better public health and safety:
1. Distribution of medicines:
In order to keep public health safe and secure trust aimed to provide basic medicines to be available to all the public especially during the Covid period. Public who cannot afford to buy basic necessities for daily living were identified and were provided with the necessary medicines.
2. Financial Aid for Medical Treatment:
There were people who could not afford treatment and were struggling for survival. Such people were identified and were helped with medical assistance for overcoming the health issues.
3. Conducting Blood Donation Camp At Regular Intervals Of Time:
One of the major issues identified by the trust was the difficulty of availability of blood in hospitals. This increased to a greater extent during Covid period. Many of the individuals from the public reported loss of near and closed ones due to health issues and non-availability of blood. The trust came forward in such drastic situations to help blood banks of hospitals to keep the stock and help the poor and needy people. The hospital authorities, public and the recipients appreciated the work of the trust in this regard.
Support Education Of Deserving Students
In order to support education of deserving students from impoverished families. The Trust has set up a dedicated team and fund. Towards this direction note books, text books, exam pads and other stationery items were distributed in Chamundi puram (2018-2019).
‘Vidyananda Sri’ Scholarship Program:
The Trust initiated school scholarship program named as ‘Vidyananda Sri’ for poor students for education purpose. As an initiative two students of Cauvery Educational Institutions who could not appear for SSLC exams due to inability to pay the fees were helped through the scholarship program.
Educational Support:
The Trust provided needed educational support to HIV infected children in Ashakirana Hospital, Mysore.
Distribution Of Stationery Materials:
The Trust distributed books and stationery materials to the school children under the care of Samanvaya Trust, Shivamoga.
Provided UPS to Govt School:
The trust supported Govt School in Ponnampet by providing UPS to the school children for uninterrupted power supply for the children.
Distribution Of Food Packets
In order to satiate the hunger of poor people. The Trust continually serves food. During the pandemic distribution of food packets and grocery kits were undertaken in large scale at regular intervals of time.
Conducting Cleanliness Drive
The HO of The Trust being in Mysore a Cultural and Heritage City, which has won 5 times the National Title/Award for being “Clean City” has devoted itself in conducting Cleanliness Drive. It organized drives on various occasions in which the Youth of The City were united together to collect, segregate and dispose of waste littered in The City. The proceeds collected from re-cycled waste were further used to charitable activities.